Share

ನಾವು ಪ್ರತಿನಿತ್ಯ ಪೂಜೆ ಮಾಡುವ ಈ ಪವಿತ್ರವಾದ ತುಳಸಿಯನ್ನು ಭಕ್ತಿಯಿಂದ ಮಾತ್ರವಲ್ಲದೆ ಆಯುರ್ವೇದ ಶಾಸ್ತ್ರದಲ್ಲಿ ಮತ್ತು ವೈದ್ಯಕೀಯವಾಗಿ ಕೂಡ ಈ ಪವಿತ್ರವಾದ ಸಸ್ಯವನ್ನು ಸರ್ವ ಶ್ರೇಷ್ಠ ಎಂದು ತಿಳಿದಿದ್ದೆವೆ, ಈ ಆಯುರ್ವೇದದಲ್ಲಿ ತುಳಸಿಯದ್ದು ಸಿಂಹಪಾಲು ಮತ್ತು ಇದರ ಶ್ರೇಷ್ಟತೆ ಅಪಾರ, ಈ ಕಾರಣದಿಂದ ನಾವು ತುಳಸಿಯನ್ನು ಸರ್ವಶ್ರೇಷ್ಠ, ಸರ್ವ ರೋಗ ನಿವಾರಕ ಸಂಪನ್ಮೂಲ ಎಂದು ತಿಳಿದಿದ್ದೇವೆ.

ಹಿಂದೂ ಧರ್ಮದ ಶಾಸ್ತ್ರಗಳ ಪ್ರಕಾರ ಈ ಪವಿತ್ರವಾದ ತುಳಸಿ ಅದ್ಯಾತ್ಮಿಕವಾಗಿ ಕೂಡ ಇದು ಎಲ್ಲ ರೀತಿಯ ಕೆಡುಕು ತೊಂದರೆಗಳನ್ನು ನಿವಾರಣೆ ಮಾಡುತ್ತದೆ, ಈ ಸಸ್ಯಗಳ ಅದ್ಭುತವಾದ ಲಕ್ಷಣಗಳ ಬಗೆಗೆ ಹಿಂದೂ ಪುರಾಣ ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲು ತಿಳಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲಾ ಹಿಂದೂಗಳ ಮನೆಯ ಮುಂದೆ ತುಳಸಿಯನ್ನು ಕಾಣಬಹುದಾಗಿದೆ ಏಕೆಂದರೆ ಈ ಗಿಡವಿದ್ದರೆ ಅ ಮನೆಗೆ ದುಷ್ಟ ಶಕ್ತಿಗಳಿಂದ ಸದಾ ಒದಗಿಸುತ್ತದೆ. ಈ ತುಳಸಿಯು ಹಸಿರಾಗಿರುವಾಗ ಆ ಮನೆಯು ಸಮೃದ್ಧಿಯಿಂದ ಇರುವುದನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಅಶುಭ ನಡೆಯುತ್ತೆ ಎನ್ನುದರ ಮುನ್ಸೂಚನೆಯನ್ನೂ ಮನೆಯಲ್ಲಿರುವ ತುಳಸಿ ಸಸ್ಯ ನೀಡುತ್ತದೆ. ಹೇಗೆಂದರೆ ನೀವು ಎಷ್ಟೇ ಪೋಷಣೆ ಮಾಡಿದ್ರೂ ಕೆಲವೊಮ್ಮೆ ತುಳಸಿ ಗಿಡ ಚಿಗುರುವುದಿಲ್ಲ. ಅದು ನಿಧಾನವಾಗಿ ಬಾಡುತ್ತಾ ಬರುತ್ತದೆ. ಈ ರೀತಿ ನಡೆಯುವ ಘಟನೆ ಮುಂದೆ ಆಗುವ ಆಶುಭವನ್ನು ತಿಳಿಸುತ್ತದೆ.

ಇನ್ನು ಮನೆಯಲ್ಲಿ ಋಣಾತ್ಮಕ ದುಷ್ಟಶಕ್ತಿಯು ಇದ್ದರೆ, ಕುಟುಂಬದಲ್ಲಿ ಏನಾದರೂ ಅನಗತ್ಯ ಕಲಹಗಳಾಗುತ್ತಿದ್ದಾರೆ, ನಿಮ್ಮ ಮಕ್ಕಳ ವಿದ್ಯಾಬ್ಯಾಸದಲ್ಲಿ ಅಡಚಣೆಗಳು ಹಾಗೂ ಮಕ್ಕಳು ಮೊಂಡುತನವನ್ನು ತೋರುತ್ತಿದ್ದರೆ, ನಿಮ್ಮ ಕುಟುಂಬದ ಖರ್ಚು ಹೆಚ್ಚಾಗಿ ಹಣವು ನಿಮ್ಮ ಕೈಯಲ್ಲಿ ನಿಲ್ಲದಿದ್ದರೆ, ಮನೆತುಂಬಾ ಸಾಲ, ಕುಟುಂಬದ ಸದಸ್ಯರಲ್ಲಿ ಹಣಕಾಸಿನ ಕೊರತೆಯು ಕಾಡುತಿದ್ದರೆ, ಇಂತಹ ಕಷ್ಟಕರವಾದ ಸಮಸ್ಯೆಗಳು ನಿಮ್ಮ ಕುಟುಂಬವನ್ನು ಬಾಧಿಸುತಿದ್ದರೆ. ಇದಕ್ಕೆಲ್ಲ ನಿಮ್ಮ ಮನೆ ಮುಂದೆ ಇರೋ ಪವಿತ್ರವಾದ ದೈವೀ ತುಳಸಿಯೇ ಪರಿಹಾರ ನೀಡುತ್ತದೆ.

ಹೌದು, ನಿಮಗೆ ಆಶ್ಚರ್ಯವಾದರೂ ಇದು ಅಂತಿಮ ಸತ್ಯ, ಹಾಗಾದರೆ ಪರಿಹಾರ ಹೇಗೆ ಎಂಬುವುದನ್ನು ಸವಿವರವಾಗಿ ತಿಳಿಯೋಣ ಬನ್ನಿ. ನೀವು ಒಳ್ಳೆಯ ಮನಸಿನಿಂದ ತುಳಸಿ ಗಿಡವನ್ನು ಭಕ್ತಿಯಿಂದ ಸ್ವಚ್ಛವನ್ನು ಮಾಡಿ, ನಂತರ ಶುದ್ಧ ಮನಸ್ಸಿನಿಂದ ಸುಂದರವಾದ ರಂಗೋಲಿ ಇಟ್ಟು ತುಪ್ಪದ ಅಥವಾ ಎಣ್ಣೆಯ ಒಂದು ದೀಪ ಅಚ್ಚಿದರೆ ಸಾಕು, ಅನಂತರ ನಿಮ್ಮ ಮನೆಯಲ್ಲಿನ ದುಷ್ಟ ಅಥವಾ ಋಣಾತ್ಮಕ ಶಕ್ತಿಗಳು ಮಾಯಾವಾಗಿ, ನಿಮ್ಮ ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ, ನಿಮ್ಮ ಕುಟುಂಬದ ಮಕ್ಕಳ ವಿದ್ಯಾಬ್ಯಾಸದಲ್ಲಿ ಇರುವ ತೊಂದರೆಗಳು ಹಾಗೂ ಮಕ್ಕಳ ಮೊಂಡುತನ ಈ ಸಮಸ್ಯೆಗಳೆಲ್ಲ ದೂರವಾಗಿ, ಸುಖ ಶಾಂತಿಯು ನೆಲೆಸುತ್ತದೆ.

ಇದಕ್ಕೂ ಮೊದಲು ನೀವು ಶುಭ್ರವಾಗಿ, ನಂತರ ಮುಂಜಾನೆ ಮತ್ತು ಮುಸಂಜೆಯ ವೇಳೆಯಲ್ಲಿ ಪವಿತ್ರವಾದ ತುಳಸಿ ಗಿಡಕ್ಕೆ ನೀರನ್ನು ಹಾಕಿ, ನಂತರ ಶ್ರದ್ಧೆಯಿಂದ ಅರಿಶಿಣ ಕುಂಕುಮ ಇಟ್ಟು, ಹೂವನ್ನು ಹಾಕಿ, ದೀಪ ಹಚ್ಚಿ, ಪೂಜೆ ಮಾಡಿ. ಪೂಜೆಯಾದ ಬಳಿಕ ನೀವು ಒಂದು ರುಪಾಯಿಯ ಒಂದು ಕಾಯಿನ್ ಅನ್ನು ತೆಗೆದುಕೊಂಡು ನಿಮ್ಮ ಎರಡು ಅಂಗೈಗಳ ಮದ್ಯೆ ಅದನ್ನು ಇರಿಸಿ ನಿಮ್ಮ ಕೋರಿಕೆಗಳನ್ನು ಭಕ್ತಿಯಿಂದ ಬೇಡಿಕೊಳ್ಳಿ. ಅನಂತರ ಆ ಒಂದು ರುಪಾಯಿಯನ್ನು ತುಳಸಿ ಗಿಡದ ತಾಳಿನಲ್ಲಿ ಸ್ವಲ್ಪವೇ ಮಣ್ಣು ತೆಗೆದು, ನಾಣ್ಯವನ್ನು ಅಲ್ಲಿಟ್ಟು ಮಣ್ಣು ಮುಚ್ಚಿಬಿಡಿ.

ಈ ರೀತಿ ನೀವು ಮಾಡಿದ ಕೆಲವೇ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಗಳನ್ನು ಕಾಣಬಹುದಾಗಿದೆ, ಹಾಗೆಯೇ ನಿಮ್ಮ ಎಲ್ಲಾ ಬೇಡಿಕೆಯು ನೆರವೇರುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ. ಮತ್ತು ನಿಮ್ಮ ಜೀವನದಲ್ಲಿ ಸಿರಿ ಸಂಪತ್ತು, ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಎಲ್ಲವನ್ನು ಗಳಿಸಬಹುದು ಎನ್ನುತ್ತವೆ ಅನುಭವಿ ಗುರು ಹಿರಿಯರ ನುಡಿಗಳು.

ಈ ಒಂದು ರುಪಾಯಿ ನಾಣ್ಯವು ಕೂಡ ನಿಮ್ಮ ಮನೆಯಲ್ಲಿ ನೆಲೆಸಿರುವ ಋಣಾತ್ಮಕ ಶಕ್ತಿಯನ್ನು ನಾಶಮಾಡಿ, ಮತ್ತೆ ಯಾವುದೇ ಋಣಾತ್ಮಕ ಶಕ್ತಿಯನ್ನು ಪ್ರವೇಶಿಸದಂತೆ ತಡೆದು ಧನಾತ್ಮಕ ಶಕ್ತಿಯನ್ನು ಬೆಳೆಸುತ್ತದೆ, ಅಷ್ಟೇ ಅಲ್ಲದೆ ಇದು ನಿಮಗೆ ಅಥವಾ ನಿಮ್ಮ ಕುಟುಬದವರಿಗೆ ಆಗುವಂತಹ ಕೆಟ್ಟ ಕಣ್ಣಿನ ದೃಷ್ಟಿಯನ್ನು ಕೂಡ ಕಡಿಮೆ ಮಾಡುತ್ತವೆ.

ಈ ಉಪಯುಕ್ತ ಮಾಹಿತಿಗಳು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳುವುದರ ಮೂಲಕ ನಮ್ಮ ಕಾರ್ಯವನ್ನು ಬೆಂಬಲಿಸುವುದನ್ನು ಮರೆಯಬೇಡಿ, ವಂದನೆಗಳು.

Comments

Share