Share

ಜಾತಕ ನೋಡದೆ ಯಾವ ಕಾರಣಕ್ಕೂ ಗುರು ಹಿರಿಯರು ಯಾವುದೇ ಜೋಡಿಯನ್ನು ಮಾಡುವುದಿಲ್ಲ, ಜಾತಕ ಹೊಂದಬೇಕು ಅನ್ನುತ್ತಾರೆ, ಹುಡುಗ ಹುಡುಗಿ ಒಪ್ಪಿದರು ಜಾತಕ ಕುಡಿ ಬರಲಿಲ್ಲ ಅಂದರೆ ಮಾಡುವೆ ಮಾಡುವುದೇ ಇಲ್ಲ ಹಾಗಾದರೆ ಯಾವ ರಾಶಿಯಾ ಗಂಡಿಗೆ ಯಾವ ರಾಶಿಯ ಹೆಣ್ಣು ಸರಿಯಾಗಿ ಹೊಂದುತ್ತದೆ ಎಂಬುವುದನ್ನ ಇಂದು ತಿಳಿಯೋಣ.

ಮೇಷ ರಾಶಿ :

ನಿಮ್ಮ ರಾಶಿಗೆ ಹೊಂದುವ ಅಥವಾ ಸರಿಯಾದ ಜೋಡಿ, ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಜೋಡಿ ರಾಶಿ ಎಂದರೆ ಧನಸ್ಸು ಅಥವಾ ಸಿಂಹ ಹಾಗು ವಿರುದ್ಧವಾದ ರಾಶಿಯಂದರೆ ಕಟಕ, ಮೀನಾ ಹಾಗು ವೃಷಭ.

ವೃಷಭ :

ನೀವು ಸ್ವಲ್ಪ ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳಬೇಕು ಕಾರಣ ನಿಮಗೆ ಇಷ್ಟ ಆಗುವವರ ರಾಶಿ ಕನ್ಯಾ ಹಾಗ್ ಮಕರವಾಗಿರುತ್ತದೆ, ಆದರೆ ನೀವು ಕಟಕ, ವೃಶ್ಚಿಕ ಅಥವಾ ಮೀನಾ ರಾಶಿಯವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಜೀವನ ಉತ್ತಮ.

ಮಿಥುನ ರಾಶಿ :

ಧನಸ್ಸು ಮಕರ ಅಥವಾ ಕುಂಭ ರಾಶಿಯಲ್ಲಿ ಒಬ್ಬರನ್ನ ನಿಮ್ಮ ಜೋಡಿ ಆಗಿ ಆಯ್ಕೆಯನ್ನು ಮಾಡಿಕೊಂಡಿದಲ್ಲಿ ನಿಮ್ಮ ಜೀವನ ಅತ್ಯಂತ ಸುಖಮಯವಾಗಿರುತ್ತದೆ. ಇದರಿಂದ ನಿಮ್ಮ ಸುಂದರ ಸ್ವಪ್ನಗಳು ಪ್ರತಿಫಲಿಸುತ್ತವೆ.

ಕರ್ಕ ರಾಶಿ :

ನಿಮಗೆ ಸರಿಯಾದ ಜೋಡಿ ರಾಶಿ ಎಂದರೆ ವೃಶ್ಚಿಕ, ಕನ್ಯಾ ಅಥವಾ ಮಕರ ರಾಶಿಯವರು, ಜೀವನದಲ್ಲಿ ಯಶಸ್ಸು ಪಡೆಯಲು ಈ ರಾಶಿಯಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ. ಮತ್ತು ನಿಮ್ಮ ಜೀವನವನ್ನು ಸಂತೋಷದಾಯಕ ಗೊಳಿಸಿ.

ಸಿಂಹ ರಾಶಿ :

ನಿಮ್ಮದು ನಾಯಕ ಸ್ವಭಾವದ ಗುಣವು ಇರುವುದರಿಂದ ನಿಮಗೆ ಸರಿಯಾದ ಜೋಡಿ ಎಂದರೆ ತುಲಾ ಹಾಗು ಮಿಥುನ ರಾಶಿಯವರು ಮಾತ್ರ, ಮತ್ತು ನೀವು ಆಕರ್ಷಿತರಾಗುವುದು ಈ ರಾಶಿಯವರೊಂದಿಗೆ.

ಕನ್ಯಾ ರಾಶಿ :

ನಿಮಗೆ ಸರಿಯಾದ ಜೋಡಿ ಎಂದರೆ ಕಟಕ, ವೃಶ್ಚಿಕ ಅಥವಾ ಮೀನಾ ರಾಶಿಯವರು, ಈ ರಾಶಿಯಲ್ಲಿ ಒಂದು ನಿಮ್ಮ ಆಯ್ಕೆಯಾಗಿದ್ದಲ್ಲಿ ಮದುವೆ ಸಂಬಂದ್ಧದಲ್ಲಿ ಯಾವುದೇ ಬಿರುಕು ಬರುವುದಿಲ್ಲ, ಮತ್ತು ನಿಮ್ಮ ವೈವಾಹಿಕ ಜೀವನದ ಕನಸುಗಳು ಕೈಗೂಡುವುದು.

ತುಲಾ ರಾಶಿ :

ನಿಮಗೆ ಹೊಂದುವ ರಾಶಿಗಳು ಸಿಂಹ, ಮೇಷ ಅಥವಾ ಧನಸ್ಸು ರಾಶಿಯವರು ಮಾತ್ರ, ನಿಮ್ಮ ವೈವಾಹಿಕ ಉತ್ತಮ ಜೀವನಕ್ಕಾಗಿ ಈ ರಾಶಿಗಳಲ್ಲಿ ನಿಮ್ಮ ಉತ್ತಮವಾದ ಆಯ್ಕೆ ಇರಲಿ. ಇದರಿಂದ ನಿಮ್ಮ ಜೀವನದಲ್ಲಿ ಮಧುರ ಕ್ಷಣಗಳು ಎಂದೆಂದಿಗೂ ಮೂಡುತ್ತಲೆ ಇರುತ್ತದೆ.

ವೃಶ್ಚಿಕ ರಾಶಿ :

ನಿಮ್ಮದು ಅದೃಷ್ಟದ ರಾಶಿ, ಏಕೆಂದರೆ ನಿಮ್ಮ ರಾಶಿಗೆ ನಿಮ್ಮ ರಾಶಿಯವರು ತಕ್ಕ ಜೋಡಿ ಆಗಿರುತ್ತಾರೆ, ಅಥವಾ ಕನ್ಯಾ ರಾಶಿ ಇಲ್ಲವಾದರೆ ಮಕರ ರಾಶಿಯವರು ನಿಮಗೆ ಉತ್ತಮ ಬೆಂಬಲವನ್ನು ಜೀವನದಲ್ಲಿ ನೀಡುತ್ತಾರೆ.

ಧನು ರಾಶಿ :

ನಿಮಗೆ ಸರಿ ಹೊಂದುವ ಜೋಡಿಯಂದರೆ ಮಿಥುನ, ತುಲಾ ಅಥವಾ ಕುಂಭ ರಾಶಿಯವರು. ಈ ರಾಶಿಯವರನ್ನು ನೀವು ವಿವಾಹ ಆದರೆ ನಿಮ್ಮ ಬಾಳ್ವೆಯು ಖುಷಿಯಿಂದ ಇರುತ್ತದೆ. ಮತ್ತು ನಿಮ್ಮ ಜೀವನದಲ್ಲಿ ಸಂತೃಪ್ತಿಯು ನೆಲೆಸುತ್ತದೆ.

ಮಕರ ರಾಶಿ :

ನಿಮಗೆ ಸರಿಯಾಗಿ ಹೊಂದುವ ರಾಶಿಗಳು ಕಟಕ ಮತ್ತು ವೃಶ್ಚಿಕ ಅಥವಾ ಮೀನಾ ರಾಶಿಯವರು ಮಾತ್ರ, ಈ ರಾಶಿಯವರನ್ನು ನೀವು ವಿವಾಹ ಆದರೆ ನಿಮ್ಮ ಜೀವನ ಸುಖಮಯ ಆಗಿರುತ್ತದೆ.

ಕುಂಭ ರಾಶಿ :

ನಿಮ್ಮ ಜೀವನದಲ್ಲಿ ಯಾವತ್ತಿಗೂ ನಿಮ್ಮ ಸಂಗಾತಿಯ ನಡುವೆ ಬಿರುಕು ಬರದೇ ಒಂದಾಗಿ ಸಂತೋಷದಿಂದ ಇರಬೇಕು ಅಂದರೆ ನಿಮ್ಮ ಆಯ್ಕೆಯ ರಾಶಿಗಳು ಮೇಷ, ಸಿಂಹ ಅಥವಾ ಧನಸ್ಸು ಆಗಿದ್ದರೆ ಮಾತ್ರ ಸಾಧ್ಯ.

ಮೀನಾ ರಾಶಿ :

ನಿಮಗೆ ಮತ್ತು ಸುಖಮಯ ಜೀವನಕ್ಕೆ ಸರಿ ಹೊಂದುವ ರಾಶಿಯಂದರೆ ವೃಶ್ಚಿಕ, ಕನ್ಯಾ ಅಥವಾ ಮಕರ ರಾಶಿಯವರು ಮಾತ್ರ. ಈ ರಾಶಿಯವರನ್ನು ನೀವು ವಿವಾಹವಾದರೆ ನಿಮ್ಮ ಜೀವನ ಸುಖಮಯ ಆಗಿರುತ್ತದೆ.

Comments

Share