Share

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಗುರುವಾರ, ಶತಭಿಷ ನಕ್ಷತ್ರ,
ಬೆಳಗ್ಗೆ 9:14 ನಂತರ ಪೂರ್ವಭಾದ್ರಪದ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:34 ರಿಂದ 3:01
ಗುಳಿಕಕಾಲ: ಬೆಳಗ್ಗೆ 9:13 ಂದ 10:40
ಯಮಗಂಡಕಾಲ: ಬೆಳಗ್ಗೆ 6:18 ರಿಂದ 7:46

ಮೇಷ: ಶತ್ರುಗಳ ದಮನ, ಕೆಲಸ ಕಾರ್ಯಗಳಲ್ಲಿ ಬೇಸರ, ಅವಕಾಶಗಳು ಕೈ ತಪ್ಪುವುದು, ಸೇವೆ ಮಾಡುವ ವೃತ್ತಿ ಪ್ರಾಪ್ತಿ, ದೇವತಾ ದರ್ಶನ, ತಂದೆಯಿಂದ ಅನುಕೂಲ, ಅನಗತ್ಯ ತಿರುಗಾಟ, ಮನಸ್ಸಿನಲ್ಲಿ ಆತಂಕ.

ವೃಷಭ: ಉದ್ಯೋಗ ನಿಮಿತ್ತ ಪ್ರಯಾಣ, ಹಣಕಾಸು ಮೋಸ ಸಾಧ್ಯತೆ, ಅನಗತ್ಯ ಕಿರಿಕಿರಿ, ಸೋಲು, ನಷ್ಟ, ನಿರಾಸೆ, ಸಹೋದರನಿಂದ ಬೇಸರ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಾಟ-ಮಂತ್ರ ತಂತ್ರದ ಭೀತಿ, ಲಾಭ ಪ್ರಮಾಣ ಕುಂಠಿತ, ಮಿತ್ರರೇ ಶತ್ರುಗಳಾಗುವರು.

ಮಿಥುನ: ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಆತುರ ನಿರ್ಧಾರದಿಂದ ತೊಂದರೆ, ಗ್ಯಾಸ್ಟ್ರಿಕ್, ಚರ್ಮ ತುರಿಕೆ, ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಬೇಸರ, ಉದ್ಯೋಗ ಬದಲಾವಣೆಗೆ ಚಿಂತೆ, ಪಾಲುದಾರಿಕೆಯಲ್ಲಿ ಸಮಸ್ಯೆ, ಒಂಟಿಯಾಗಿರಲು ಬಯಸುವಿರಿ.

ಕಟಕ: ದುಸ್ವಪ್ನಗಳಿಂದ ಆತಂಕ, ಹಾರ್ಮೋನ್ಸ್ ವ್ಯತ್ಯಾಸ, ಅಜೀರ್ಣ, ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯೊಂದಿಗೆ ಶತ್ರುತ್ವ, ಪ್ರಯಾಣ ರದ್ದಾಗುವ ಸಾಧ್ಯತೆ, ಸಾಲ ಮಾಡುವ ಪರಿಸ್ಥಿತಿ, ಉದ್ಯಮದಲ್ಲಿ ತೊಂದರೆ.

ಸಿಂಹ: ಅನಿರೀಕ್ಷಿತ ಲಾಭ ಪ್ರಮಾಣ, ಮಕ್ಕಳ ಜೀವನದಲ್ಲಿ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಹಣ ವಿಚಾರದಲ್ಲಿ ತಪ್ಪು ನಿರ್ಧಾರ, ಆತ್ಮೀಯರಿಂದ ಸೋಲು, ಗುಪ್ತ ಧನಾಗಮನ, ಭವಿಷ್ಯದ ಬಗ್ಗೆ ಚಿಂತನೆ.

ಕನ್ಯಾ: ಸ್ಥಿರಾಸ್ತಿ ವಾಹನದಿಂದ ತೊಂದರೆ, ಆಧ್ಯಾತ್ಮಿಕ ವಿಚಾರದಲ್ಲಿ ಒಲವು, ಉದ್ಯೋಗ ಸ್ಥಳದಲ್ಲಿ ಗೊಂದಲ, ಸಂಗಾತಿಯಿಂದ ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಸಮಸ್ಯೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಗ್ನಿಯಿಂದ ತೊಂದರೆ.

ತುಲಾ: ಸಾಲ ಬಾಧೆ, ಶತ್ರು ಕಾಟ, ಮಾಟ-ಮಂತ್ರದ ಭೀತಿ, ಭವಿಷ್ಯದ ಬಗ್ಗೆ ಅವಲೋಕನ, ಬಂಧುಗಳಿಂದ ಕಿರಿಕಿರಿ, ಅನಗತ್ಯ ತಿರುಗಾಡುವ ಮನಸ್ಥಿತಿ, ಹಣಕಾಸು ವಿಚಾರದಲ್ಲಿ ಹಿನ್ನಡೆ, ಗುರು ದರ್ಶನದಿಂದ ಅನುಕೂಲ.

ವೃಶ್ಚಿಕ: ಆರ್ಥಿಕ ಪ್ರಗತಿ, ಗುರುಗಳ ಮಾರ್ಗದರ್ಶನಕ್ಕೆ ಮನಸ್ಸು, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ, ವಿದ್ಯೆಯಲ್ಲಿ ಅಭಿವೃದ್ಧಿ, ಉದ್ಯೋಗದಲ್ಲಿ ಅನುಕೂಲ, ಅನಿರೀಕ್ಷಿತ ಅಪವಾದ, ಆಧ್ಮಾತ್ಮಿಕ ವಿಚಾರದಲ್ಲಿ ಒಲವು.

ಧನಸ್ಸು: ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ದೇಹದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ಜಿಗುಪ್ಸೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಹಣಕಾಸು ಮೋಸ, ಆರೋಗ್ಯದಲ್ಲಿ ವ್ಯತ್ಯಾಸ,ಮನೆ ವಾತಾವರಣದಲ್ಲಿ ಅಶಾಂತಿ, ಮಾನಸಿಕ ನೆಮ್ಮದಿಗೆ ದೇವರ ಮೊರೆ.

ಮಕರ: ನಿದ್ರೆಯಲ್ಲಿ ಕೆಟ್ಟ ಕನಸು, ಇಲ್ಲ ಸಲ್ಲದ ಅಪವಾದ, ಕಷ್ಟಕರವಾದ ದಿವಸ, ಗುರುಗಳ ಭೇಟಿ, ವಿದೇಶ ಪ್ರಯಾಣ ಯೋಗ, ಶತ್ರುಗಳ ನಾಶ, ವ್ಯವಹಾರದಲ್ಲಿ ದ್ರೋಹ, ಗೃಹ ಬದಲಾವಣೆಗೆ ಸಮಸ್ಯೆ, ಅನ್ಯರ ಮಾತಿಂದ ಆತಂಕ.

ಕುಂಭ: ಆರ್ಥಿಕ ಸಮಸ್ಯೆ ದೂರ, ಲಾಭ ಪ್ರಮಾಣ ಅಧಿಕ, ಸಾಲ ಬಾಧೆಯಿಂದ ಮುಕ್ತಿ, ಉತ್ತಮ ಗೌರವ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ, ಶುಭ ಕಾರ್ಯಗಳು, ಕುಟುಂಬದಲ್ಲಿ ಏಳಿಗೆ, ಮಕ್ಕಳ ನಡವಳಿಕೆಯಿಂದ ಬೇಸರ.

ಮೀನ: ಉದ್ಯೋಗದಲ್ಲಿ ಕಿರಿಕಿರಿ, ಕೆಲಸ ಬದಲಾಯಿಸಲು ಚಿಂತನೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆರೋಗ್ಯಕ್ಕಾಗಿ ಪರಿಶ್ರಮ, ಆತ್ಮಾಭಿಮಾನ ಚೈತನ್ಯ ವೃದ್ಧಿ, ಸ್ಥಿರಾಸ್ತಿ ಗೊಂದಲ.

Comments

Share