Share

ನಮ್ಮ ದೇಶದ ಬೆನ್ನೆಲುಬು ರೈತ. ಈ ರೈತ ಇತ್ತೀಚಿನ ದಿನಗಳಲ್ಲಿ ತನ್ನ ಭರವಸೆಯನ್ನು ಕಳೆದುಕೊಂಡು ಬೇರೆ ಉದ್ಯೋಗದ ಕಡೆ ಮನಸ್ಸು ಮಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಹಿರಿಯರು ಸ್ವಲ್ಪವಾದರೂ ಕೃಷಿಯನ್ನು ಮಾಡುತ್ತಿದ್ದರು ಆದರೆ ಇಂದಿನ ಯುವಕರು ಕೃಷಿಯ ಕಡೆ ಸ್ವಲ್ಪವೂ ಆಸಕ್ತಿ ತೋರುತ್ತಿಲ್ಲ. ಎಲ್ಲರೂ ಕೂಡ ಹಳ್ಳಿಗಳನ್ನು ಬಿಟ್ಟು ನಗರ ಪ್ರದೇಶದ ಕಡೆ ವಲಸೆ ಹೋಗುತ್ತಿರುವುದನ್ನು ನಾವು ಗಮನಿಸಬಹುದು. ಹಣವನ್ನು ಮಾಡಲು ಕೃಷಿ ಮಾಡಿ ಮಾಡಬಹುದು ಎಂಬ ಒಂದು ಕಲ್ಪನೆಯೆ ಜನರಿಂದ ದೂರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕರೋನಾ ಎಂಬ ಮಹಾಮಾರಿ ಬಂದು ನಗರ ವಾಸಿಗಳೆಲ್ಲ ಹಳ್ಳಿಯ ಕಡೆ ಬಂದು ಜೀವನ ಮಾಡುವಂತಾಗಿದೆ. ಅವರೆಲ್ಲ ಜೀವನಕ್ಕೆ ಆಧಾರವಾಗಿ ಕೃಷಿಯನ್ನು ಅವಲಂಬಿಸಬೇಕಾಗಿದೆ. ಆದರೆ ಈ ದಿನ ನಾವು ಹೇಳಹೊರಟಿರುವ ವಿಷಯ ಏನು ಗೊತ್ತೆ.

ಸ್ನೇಹಿತರೇ ಸಾಮಾನ್ಯವಾಗಿ ನಾವು ಕೆಲಸದ ಜಾಹೀರಾತುಗಳನ್ನು ನೋಡಿರುತ್ತೇವೆ. ಆದರೆ ರೈತರು ಕೆಲಸಕ್ಕೆ ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ಎಂದು ನೋಡಿರುವುದಿಲ್ಲ. ಆದರೆ ಆ ರೀತಿಯ ಜಾಹೀರಾತನ್ನು ನಾವು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಹೆಚ್ಚಾಗಿ ನೋಡಬಹುದಾಗಿತ್ತು. ಆ ಜಾಹೀರಾತು ಏನು ಮತ್ತು ಅಲ್ಲಿ ಮಾಡಲು ಸಿಗುತ್ತಿದ್ದ ಕೆಲಸ ಏನು ಅದನ್ನು ಯಾರು ನೀಡಿದರೂ ಏತಕ್ಕಾಗಿ ನೀಡಿದರು ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿದೆ ನೋಡಿ.

ವಿಡಿಯೋ ನೋಡಿ:
ಈ ರೀತಿ ರೈತರು ಕೆಲಸಕ್ಕೆ ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ನೀಡಿದವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದ ಕಮಲೇಶ್ ಮತ್ತು ತಂಡ. ಇವರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ನಿಟ್ಟಿನಲ್ಲಿ ಈ ರೀತಿಯ ಜಾಹೀರಾತನ್ನು ನೀಡಿದ್ದಾರೆ ಮತ್ತು ಇಲ್ಲಿ ಕೆಲಸವನ್ನು ಅರಸಿ ಬರುವವರಿಗೆ ವಸತಿ ಮತ್ತು ಊಟವನ್ನು ಉಚಿತವಾಗಿ ನೀಡುತ್ತಿದ್ದಾರೆ ಮತ್ತು ತಿಂಗಳಿಗೆ ಹತ್ತರಿಂದ ಮೂವತ್ತು ಸಾವಿರ ರೂಪಾಯಿಗಳ ಸಂಬಳವನ್ನು ಕೂಡ ನೀಡುತ್ತಾರೆ. ಅವರ ಕೆಲಸಕ್ಕೆ ಅನುಗುಣವಾಗಿ ಮತ್ತು ಅವರ ಕೆಲಸದ ಆಧಾರದ ಮೇಲೆ ಅವರಿಗೆ ಸಂಬಳ ನಿಗದಿಯಾಗುತ್ತದೆ.

ಇಲ್ಲಿ ಮಾಡುವಂತಹ ಕೆಲಸಗಳು ಇಷ್ಟೇ ಇವರು ನೈಸರ್ಗಿಕ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುತ್ತಿರುವುದರಿಂದಾಗಿ ಎಣ್ಣೆಯನ್ನು ಎತ್ತಿನ ಗಾಣದ ಮುಖಾಂತರ ತೆಗೆಯುವುದು. ಅದು ಕಡಲೆಕಾಯಿ, ಕೊಬ್ಬರಿ ಸೂರ್ಯಕಾಂತಿ ಈ ರೀತಿ ಬೀಜಗಳನ್ನು ಬಳಸಿ ಗಾಣಕ್ಕೆ ಹಾಕಿ ನೈಸರ್ಗಿಕವಾಗಿ ಎಣ್ಣೆ ಪಡೆಯುವ ವಿಧಾನ.

ಹೈನುಗಾರಿಕೆ, ಮೀನುಗಾರಿಕೆ, ಸಾವಯವ ಕೃಷಿ ಬೆಲ್ಲದ ತಯಾರಿಕೆ ಈ ರೀತಿ ಎಲ್ಲವನ್ನು ಯಾವುದೇ ಮಿಷನರಿಗಳನ್ನು ಬಳಸದೆ ನೈಸರ್ಗಿಕವಾಗಿ ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ರೀತಿಯಲ್ಲಿ ಕೃಷಿಯನ್ನು ಮಾಡಿ ಅದನ್ನು ಮಾರುಕಟ್ಟೆಗೆ ಬಿಡುವುದು ಇವರ ಉದ್ದೇಶವಾಗಿದೆ ಮತ್ತು ಇಲ್ಲಿ ಕೆಲಸಕ್ಕೆ ಬರುವವರಿಗೆ ನೈಸರ್ಗಿಕ ಕೃಷಿಯ ಬಗ್ಗೆ ಅನುಭವ ಇದ್ದರೆ ಉತ್ತಮ.

ನೋಡಿದರಲ್ಲ ಸ್ನೇಹಿತರೇ ಪರಿಸ್ಥಿತಿಗಳು ಎಷ್ಟು ಬದಲಾಗುತ್ತವೆ ಕಂಪನಿಗಳಿಂದ ಜಾಹೀರಾತು ಪಡೆದು ಕಂಪನಿಗಳಿಗೆ ಸೇರುತ್ತಿದ್ದ ಜನರು ಈ ದಿನ ರೈತರಿಗಾಗಿ ಜಾಹೀರಾತನ್ನು ಕೊಡುವಂತಹ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿ ಮುಂದುವರಿಯದೇ ಆದಷ್ಟು ಬೇಗ ಯುವಕರು ಕೃಷಿಯ ಕಡೆ ಮನಸ್ಸು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share